ಆಧುನಿಕ ಸಮಾಜದ ಕರಾಳ ಮುಖ - ಬಾಲ ದೇವದಾಸಿಯರು

ಆಧುನಿಕ ಸಮಾಜದ ಕರಾಳ ಮುಖ - ಬಾಲ ದೇವದಾಸಿಯರು 

 

ಸಮಾಜದಲ್ಲಿ ಬದುಕಬೇಕಾದರೆ ಹೊಟ್ಟೆ ತುಂಬಾ ಊಟ, ಮೈ ಮುಚ್ಚಲು ಬಟ್ಟೆ ಅತಿ ಅವಶ್ಯಕ 

ಆದರೆ ಇದಿಲ್ಲದೇ  ಬದುಕಬೇಕಾದರೆ ಮನಸ್ಸಿಗೆ ಎಷ್ಟು ಸಂಕಟವಾಗಬಹುದು ಒಮ್ಮೆ ಯೋಚಿಸಿ !!!

 

ಒಬ್ಬ ಮನುಷ್ಯನಿಗೆ ಯಾವ ಮನರಂಜನೆಯೂ ಇಲ್ಲದೆ ಎಷ್ಟು ವರ್ಷ ಇರಬಲ್ಲ ???

 

ಕಲಾ ಪ್ರಾಕಾರಗಳು ಮನುಷ್ಯನಿಗೆ ನೀಡಿರುವ ಮನರಂಜನೆಗೆ ಬೆಲೆ ಕಟ್ಟಲು ಸಾಧ್ಯವೇ, 

ಕಲಾ ಪ್ರಾಕಾರಗಳನ್ನು ಉಳಿಸಿ, ಬೆಳೆಸಿಕೊಟ್ಟವರ ತ್ಯಾಗವನ್ನು ನಮಗೆ ಸ್ಮರಿಸುವ ತಾಳ್ಮೆ 

ಅಥವಾ ಸೌಜನ್ಯತೆ ಉಳಿದಿದೆಯೇ, ಕಲೆಯ ಆರಾಧಕರು ಕಲೆಯನ್ನು ಪ್ರೋತ್ಸಾಹಿಸಿದಕ್ಕೆ 

ಆತ್ಮೀಯವಾಗಿ ಸ್ಮರಿಸಬೇಕೋ ಅಥವಾ ಕಲಾವಿದರನ್ನು ಅನುಭವಿಸುತ್ತಿದ್ದ ರೀತಿಗೆ ಶಪಿಸಬೇಕೋ 

ಒಂದು ತಿಳಿಯದಾಗಿದೆ.

 

ರಾಜ ಮಹಾರಾಜರ ಕಾಲದಲ್ಲಿ ಆಸ್ಥಾನ ನರ್ತಕಿಯರಾಗಿ, ಗೌರವ ಮತ್ತು ಕೀರ್ತಿ ಪಾತ್ರರಾಗಿದ್ದ 

ನರ್ತಕಿಯರ ಬದುಕು ಹಲವರ ಧಾಳಿಯಿಂದ ಸೊರಗ ತೊಡಗಿತು, ಬ್ರಿಟಿಷರ ಕಾಲದಲ್ಲಂತೂ 

ನಶಿಸೆ ಹೋಯಿತು ಎಂದರೆ ತಪ್ಪಾಗಲಾರದು. ಕಲೆಯನ್ನು ಬಿಟ್ಟು ಬೇರೇನೂ ಅರಿಯದ ಕೆಲ ಹೆಂಗಸರು 

ಬದುಕು ಸವೆಸಲು ಹಲವು ಸುಲಭ ಮಾರ್ಗಗಳು ಹುಡುಕ ತೊಡಗಿದರು, ದೇವಸ್ಥಾನದ ಅಂಗಳದ ಬದುಕು 

ಇವರು ರೂಢಿಸಿಕೊಂಡರು. ಇಂತಹ ಅನೇಕ ಕಾರಣಗಳು ಸೇರಿ ಹೆಣ್ಣಿಗೆ ಒಂದು ಪದ್ದತಿಯನ್ನೇ ಹುಟ್ಟು ಹಾಕಿತು...

 

ಗ್ರಾಮ ದೇವತೆಯೊಂದಿಗೆ ಪ್ರಾಪ್ತ ವಯಸ್ಸಿನ ಹೆಣ್ಣು ಮಗುವಿಗೆ ವಿವಾಹ ಮಾಡಿ, ಆ ನಂತರ ಹೆಣ್ಣನ್ನು 

ಒಂದು ಮೂಖ ಪ್ರಾಣಿಯಂತೆ ಹರಾಜು ಹಾಕಲಾಗುತ್ತಿತ್ತು, ಅತಿ ಹೆಚ್ಚು ಬೆಲೆ ಕೊಟ್ಟವನೇ ಅಥವಾ ಶಕ್ತಿವಂತನೋ   ಆ ಹೆಣ್ಣಿಗೆ ಮಾಲೀಕ,

ಆಕೆಯನ್ನು ಮತ್ತು ಆಕೆಯ ಸಂಸಾರವನ್ನು ತೂಗಿಸುವ ಜವಾಬ್ದಾರಿ ಆ ಮಾಲೀಕನದಾಗಿತ್ತು, ಹೀಗಾಗಿ ಹೆಣ್ಣು ಹೆತ್ತವರು

ತಮ್ಮ ಜೀವನ ಸುಲಭವಾಗಲು ಪ್ರಾಪ್ತ ವಯಸ್ಸಿನ ಹೆಣ್ಣನ್ನು ಈ ಕೆಟ್ಟ ಪದ್ದತಿಗೆ ತಳ್ಳಿದ ಎಷ್ಟೋ ಉದಾಹರಣೆಗಳಿವೆ.

 

ದೇವದಾಸಿ ಪದ್ಧತಿ ನಮ್ಮ ದೇಶದ ಕೆಲವು ಪ್ರಾಂತ್ಯಗಳಲ್ಲಿ ಹೆಣ್ಣಿಗೆ  ಅಂಟಿಕೊಂಡು ಸಮಾಜದಲ್ಲಿ ಇಂದಿಗೂ ಉಳಿದಿರುವ ಶಾಪ...

 

ಹೆಣ್ಣಿನ ಸೌಂದರ್ಯವನ್ನು ಬಡತನದ ನೆಪದಲ್ಲಿ ಸೂರೆಗೊಂಡರು ಶ್ರೀಮಂತರ ಹಿಂಡು, ಅವರಿಗೆ ಹುಟ್ಟಿದ ಹೆಣ್ಣು ಮಕ್ಕಳು 

ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ದೇವದಾಸಿ ಪದ್ದತಿಗೆ ತಳ್ಳುತಿದ್ದರಿಂದ ಈ ಪದ್ದತಿಯ ಬಲವಾಗಿ ಉಳಿದು ಬೆಳೆಯಲು 

ಸಾಧ್ಯವಾಯಿತು. ಈ ಸುಲಭ ಜೀವನ ಅಳವಡಿಸಿಕೊಳ್ಳಲು ಕೆಲವರಿಗೆ ಅವರ ಬಡತನ ಅಥವಾ ನೆರಳಿಲ್ಲದ ಬದುಕು ಕಾರಣವಾಯಿತು ಎಂದರೆ 

ತಪ್ಪಾಗಲಾರದು. ಈ ಕಲಿಯುಗದಲ್ಲಿ ಮಾಲೀಕರಿಲ್ಲದ ಕಾರಣ ದೇವದಾಸಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ, ಇದರಿಂದ 

ಹತ್ತು ಹಲವು ಗುಪ್ತ ರೋಗಗಳು ಹೆಚ್ಚ ತೊಡಗಿದೆ, ಉಳಿದಿರುವ ದೇವದಾಸಿಯರ ಬದುಕೇ ಇಷ್ಟು ಕಷ್ಟವಾದರೆ ಇನ್ನು ಅವರ ಮಕ್ಕಳ 

ಪಾಡೇನು ???

 

ಅದು ಹೆಣ್ಣು ಮಗುವಾಗಿದ್ದರೆ ಅದರ ಭವಿಷ್ಯವೇನು ???

ಈ ಕ್ರೂರ ಸಮಾಜಕ್ಕೆ ಈ ಮಗುವು ಬಲಿಯಾಗಬೇಕೆ ???

ಹೆಣ್ಣು ಮಕ್ಕಳಿಗೂ ಬದುಕುವ ಸ್ವಾತಂತ್ರ್ಯ ಇದೆ, ಆದರೆ ಬದುಕಿಸುವರು ಯಾರು ???

ಸುಂದರ ಕನಸುಗಳನ್ನು ಕಟ್ಟಿಕೊಂಡು ಅರಳುತ್ತಿರುವ ಈ ಪುಟ್ಟ ಕಂದಮ್ಮಗಳ ಬದುಕಿನ ನಿರ್ದಿಷ್ಟವಾದ ಹಾದಿಯನ್ನು ಹಾಸಿ ನಡೆಸುವರಾರು ????

 

ದೇವದಾಸಿಯರನ್ನು ಬಸವಿ, ಜೋಗಿಣಿ, ಮುಜುವಾಣಿ, ಮಾತಂಗಿ ಎನ್ನುವ ಇನ್ನು ಹಲವು ನಾಮಕರಣಗಳಿವೆ, ಈ ಪದ್ದತಿಯನ್ನು 1988 ರಲ್ಲಿ ಭಾರತ ಸರ್ಕಾರ 

ರದ್ದು ಮಾಡಿದ್ದರು, ಈ ಪದ್ಧತಿ ನಿರ್ಮೂಲನೆ ಆಗದೆ ಇರುವುದು ಸೋಜಿಗವೇ ಸರಿ.

 

ಬೆಂಗಳೂರಿನಲ್ಲಿ ಲಿಂಗ ತಾರತಮ್ಯ, ಸಂಸ್ಕೃತಿ ಮತ್ತು ಅಭಿವೃದ್ದಿಯ ಕಡೆ ಗಮನ ಹರಿಸುತ್ತ, ಆ ಕ್ಷೇತ್ರದಲ್ಲಿ ತಮ್ಮ ಕಾರ್ಯದಲ್ಲಿ ತೊಡಗಿದ್ದ ಸಂಸ್ತೆ ವಿಸ್ತಾರ್, ಹೊಸತನದ 

ತುಡಿತವಿದ್ದ ಈ ಸಂಸ್ತೆಯ ಪೋಷಕರು ಸ್ತ್ರೀ ಶೋಷಣೆ ಬಗ್ಗೆ ಜಾಗೃತಗೊಂಡರು, ಇದರ ಮೂಲಾ ಕಾರಣ ದೇವದಾಸಿ ಪದ್ಧತಿ ಎಂದು ಅರಿತ ಇವರು ಕರ್ನಾಟಕದ 

ಕೊಪ್ಪಳ ಮತ್ತು ರಾಯಚೂರ್ ಹಾಗು ಆಂಧ್ರ ಪ್ರದೇಶದ ಅದೋನಿ ಜಿಲ್ಲೆಯಲ್ಲಿ ಈ ಪದ್ದತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದರು, ಅದರಲ್ಲಿ 

ಹೊರ ಬಂದಿದ್ದೆ " ಬಾಲ ದೇವದಾಸಿ ಪದ್ಧತಿ ". ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ ವಿಸ್ತಾರ್ ಸ್ವಯಂ ಸೇವಾ ಸಂಸ್ತೆ, 2005 ರಲ್ಲಿ ಸುಮಾರು 70 ದೇವದಾಸಿಯರ 

ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡರು. ಈ ಮಾರ್ಗವೇನು ಸುಲಭವಾಗಿರಲಿಲ್ಲ ಇವರ ಈ ಯೋಜನೆಯನ್ನು ವಿರೋಧಿಸಿ ಅಲ್ಲಿಯ ಜನರು ಇವರಿಗೆ ಜೀವ ಬೆದರಿಕೆ 

ಕೂಡ ಹಾಕಿದ್ದರು ಇನ್ನು ಪೆಟ್ಟು ತಿಂದದ್ದು ಮತ್ತು ಬೈಗುಳಗಳು ಲೆಕ್ಕವೇ ಇಲ್ಲ....

 

ಬಂಧನಿ - ದೇವದಾಸಿಯರ ಮಕ್ಕಳಿಗಾಗಿ ರೂಪಿಸಿರುವ ಯೋಜನೆ  

 

ವಿಸ್ತಾರ್ ಸಂಸ್ತೆ ಕೊಪ್ಪಳದಲ್ಲಿ   ಇದೆ ರೀತಿಯ ಇನ್ನೊಂದು ಶಾಲೆಯನ್ನು ತೆರೆದಿದೆ ಇಲ್ಲಿ ಸುಮಾರು 50 ದೇವದಾಸಿ ಮಕ್ಕಳು ಕಲಿಯುತ್ತಿದ್ದಾರೆ, ಈ ಎರೆಡು ಕೇಂದ್ರದ ಮಕ್ಕಳಿಗೆ  ವಿದ್ಯಾಭ್ಯಾಸ ಮತ್ತು ಜೀವನಕ್ಕೆ ಅನುಕೂಲವಾಗುವ ಅನೇಕ ಕರಕುಶಲ ತರಬೇತಿಯನ್ನು ನೀಡಲಾಗುತಿದೆ, ಕಾಗದ ಕಲೆ, ಬೇಕರಿ, ವ್ಯವಸಾಯ, ಮತ್ತು ಅಡಿಗೆ ಮಾಡುವ 

ತರಬೇತಿಯನ್ನು ಈ ಮಕ್ಕಳು ಕಲಿಯುತ್ತಿದ್ದಾರೆ, ಈ ತರಬೇತಿಗಳು ಅವರ ಜೀವನಕ್ಕೆ ಮುಂದೆ ಆಧಾರವಾಗಿ ಸ್ವಾವಲಂಭ ಬದುಕಿಗೆ ದಾರಿಯಾಗುವ ಆಶಯದಿಂದ ಕಲಿಸಲಾಗುತಿದೆ.

 

 

 

 ಈ ಮಕ್ಕಳು ದೇವದಾಸಿ ಪದ್ದತಿಯನ್ನು ಅಳವಡಿಸಿಕೊಳ್ಳದಂತೆ, ಇವರ ಮನಸ್ತೈರ್ಯ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವಂತಹ ಅನೇಕ ಕಾರ್ಯಕ್ರಮಗಳು ರೂಪಿಸಿಲಾಗುತ್ತಿದೆ,

 ವಿಸ್ತಾರ ಜೊತೆ ಕೈ ಜೋಡಿಸಿರುವ ಸಭಲ, ಸಖಿ, ನವಜೀವನ ಮಹಿಳಾ ಒಕ್ಕೂಟ ಅಂತಹ ಹಲವು ಸಂಸ್ತೆಗಳು, ಈ ಮಕ್ಕಳ ತಾಯಿಯರನ್ನು ಅವರ ಮಕ್ಕಳನ್ನು ದೇವದಾಸಿ 

ಪದ್ದತಿಗೆ ದೂಡದಂತೆ  ಮಾನಸಿಕವಾಗಿ ತಿದ್ದುವುದರಲ್ಲಿ ಸಫಲವಾಗಿವೆ, ಸುಂದರ ಸಮಾಜದ ಕನಸು ಇಷ್ಟೇ ಅಲ್ಲವೇ ??? ಒಳ್ಳೆಯ ಕೆಲಸಗಳಿಗೆ ಕೈ ಜೋಡಿಸುವುದು 

 

ವಿಸ್ತಾರ್ ಸಂಸ್ತೆಯ ಆಶಯ ಈ ಮಕ್ಕಳನ್ನು ಸಜ್ಜನರನ್ನಾಗಿ ರೂಪಿಸುವುದು, ಮಕ್ಕಳ ವಿದ್ಯಾಭ್ಯಾಸ, ಅವರ ಬದುಕನ್ನು ಸದೃಢಗೊಳಿಸಲು  ಪಣ ತೊಟ್ಟು ನಿಂತಿರುವ ಶ್ರೀ. ಡೇವಿಡ್ ಸೆಲ್ವರಾಜ್ ಮತ್ತು ಶ್ರೀಮತಿ. ಮೆರ್ಸಿ ಕಪ್ಪನ್ ಅವರೊಂದಿಗೆ ಕೈ ಜೋಡಿಸಿರುವ ಈ ನಿಸ್ವಾರ್ತ ತಂಡದ ಬಗ್ಗೆ ಹೊಗಳಲು ಪದಗಳೇ ಸಾಲದು.

 

ಪುಟ್ಟ ಮಕ್ಕಳ ಕನಸು ಕೇಳಿದಾಗ ಮೈ ಜುಮ್ಮ್ ಎಂದ ಅನುಭವ, 

 

ಇಷ್ಟಕ್ಕೂ ಈ ಸುಂದರ ಕಂದಮ್ಮಗಳ ಕನಸೇನು ಗೊತ್ತ ???

 

ಅವರು ಹುಟ್ಟಿ ಬೆಳೆದ ಜಾಗದಲ್ಲಿ ಈ ಹಣ್ಣು ಮಕ್ಕಳು  ಶಿಕ್ಷಕಿಯರಾಗಿ " ದೇವದಾಸಿ ಪದ್ದತಿಯನ್ನು ಅಳಿಸುವುದು" 

 ಎಂತಹ ಸುಂದರ ಪ್ರಪಂಚದತ್ತ ಸಾಗುತಿದ್ದೇವೆ !!!

 

ಈ ದೇಶದ ಭವಿಷ್ಯ ಮಕ್ಕಳು, ಅವರನ್ನು ಸರಿಯಾಗಿ ನೋಡಿಕೊಂಡರೆ ಎಲ್ಲವು ಸಾಧ್ಯ, ಸರಕಾರ ಕೈ ತೊಳೆದುಕೊಂಡು ಅಸಹಾಯಕವಾಗಿ 

ಕುಳಿತಿರುವ ಸಮಯದಲ್ಲಿ "ವಿಸ್ತಾರ್" ಸ್ವಯಂ ಸೇವಾ ಸಂಸ್ತೆ ಕಾರ್ಯಗತ  ಮಾಡಿ ತೋರಿಸಿರುವುದು ನಿಜಕ್ಕೂ ಶ್ಲಾಘನೀಯ.....

 

ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಲಿ ಇಂತಹ ಸಂಘ ಸಂಸ್ತೆಗಳಿಗೆ ಪ್ರೋತ್ಸಾಹಿಸಿ ಮಾನವೀಯತೆಯನ್ನಾದರು ಉಳಿಸಲಿ.

Views: 315

Comment

You need to be a member of ಕನ್ನಡ ಬ್ಲಾಗರ್ಸ್ to add comments!

Join ಕನ್ನಡ ಬ್ಲಾಗರ್ಸ್

ಬ್ಲಾಗ್ ಲೋಕ ಬೆಳೆಯುತ್ತಿದೆ. ಬ್ಲಾಗಿಗರು ಎಲ್ಲಾ ದಿಕ್ಕಿನಲ್ಲೂ ಹರಡಿ ನಿಂತಿದ್ದಾರೆ. ಒಂದು ಹರಟೆ, ಒಂದು ಚಟಾಕಿ, ಒಂದು ಮಾಹಿತಿ ವಿನಿಮಯಕ್ಕಾಗಿ ಇದು ಒಂದು ಕೊಂಡಿ

© 2014   Created by avadhimag.com.

Badges  |  Report an Issue  |  Terms of Service